Cooperation is the Central feature of social life. Cooperation ranges from unity existing among members of a family or friends, to the bond found among nations as shown in the treaties of friendship drawn among them such as the treaty of cooperation in scientific, technical and cultural and sports matters between countries and organizations.
A Cooperative(“coop”), Co-operative(“coop”), or Cooperative(“coop”) is an autonomous association of persons who voluntarily cooperative for their mutual social, economic and cultural benfit. Cooperatives include non-profit community organizations and business that are owned and managed by the people who use its services (a consumer Cooperative) and/or by the people who work there (a worker Cooperative).
Credit is defined as the amount of trust that one has built based on purchasing products or services and making prompt payments on them. Credit is used by paying back small payments of something one has purchased over a period of time. It is a trust measured in a memory in monetary terms.
As such a cooperative is a legal entity owned and democratically controlled by its members. Members often have a close association with the enterprises and a credit cooperative is a an entity which lends and accepts amount to its members for their based on certain pre laid principle of cooperation and governed by their own doctrine termed as Bye Laws.
Agasthya Credit Cooperative society limited is one such society which was established in the year1994. The Society is registered under the Karnataka Cooperative society’s Act 1959 vide registration certificate No.DRM: C1:RJN20811:94-95 dated 31.10.1994. The Society was promoted by likeminded people numbering about 15 as chief promoters and the society has slowly and steadily has grown from strength to strength and is in existence for almost about 2 decades.
The Society is a cash rich institution and strictly following the principles as laid down in the statue. Over the years the Society has acquired land and building and was running its office at Krishnamurthypuram as well as its branch at Vijayanagar Mysore.
Address:
Agastya Credit Co.operative Society Ltd.,
#1414 6th Cross, Krishnamurthypuram, Mysore – 570 004
Experience:
The Society is an existing surplus making unit having good reserves and capital base. It has about 26 years standing in the city of Mysore with good membership. It has good fixed assets base with its own land and building.
Key Personnel:
Promoter:
The Society was established way back in 1994 with 15 members as chief promoters. Presently it has C V Parthasarathy – President, H S PrashantTatachar – Vice President, M D Gopinath – Treasurer And the director as well K Nagaraj, M R Preethan, K N Srinivasa Sharma, N Paniraj, S N Nagashankara, M R Balakrishna, S Ramakrishna(Decessed), N Ranganath, K N Arun, Nagendra, Smt Rekha and Smt M N Soumya Shri S Ramakrishna – Directors who were assassinated on 03/10/2019 and their position is vacant.
Key Managerial:
The day to day affairs of the society is taken care by the Incharge Secretary Mrs. Veena N. However for administrative convenience they have on rolls. Mrs. Uma s. as Accountant & Mr L.Narahari Cashier cum SDC, Mr M C Nagasrikantan as SDC working as Branch Incharge, Mr N S Shashidhar, -SDC Working Loan recovery process, Mr C M Vishwanath –SDC He is working as System & Software analyser, Mrs Sunitha S Cashier cum SDC, Mr Purushotham Office Assistant. These employe’s are supported by management staff.
Industry:
Credit is defined as the amount of trust that one has build based on purchasing products or services and making prompt payments of them. Credit is used by paying back small payments of something one has purchased over a period of time. As much credit stands as the testimony in monetary terms for a person to avail financials assistance for his need and to pay back easily over a period of time by coming out of the situation where one was forced either in business or otherwise to avail credit.
Today’s economy mainly banks on credit. As such the Industry credit is perennial. Many micro finance units and cooperative movements are thriving and the industry as a whole is buoyant.
Technology Employed:
Running of credit cooperative society has no special technical arrangement. However getting good members with prompt repayment and commitment with high integrity is an art. For which the governing council members have good contacts and will shore up business within known circle and ensure continuous flow of customers/depositors.
Function / Process:
- An existing members has to introduce the new member.
- A member who wishes to join the society has to take minimum share capital in the society as stipulated by the governing body from time to time.
- A member can avail credit facility from the society as per the terms and conditions governing from time to time and should pay/repay the same as stipulated.
Customers:
Members are the main customers in both ways i.e. they deposit amount and avail credit from the society and vice versa. Some members may only avail credit facility after adhering to the norms of the society and some may only deposit for a return on their deposit by way of interest.
Industry, Market and Selling:
- Industry is a socio economic requirement.
- A prospering activity with innovation in service provided and expected from a credit cooperative society.
- The venture is exclusively catering the needs in general to the society as a whole for its members.
No field is free from competition. This venture has also competition from the existing similar type societies. However the governing members who have good standing in the society will be able to get business through their contacts and their previous experience will ensure a good business.
Working Capitalin 1994-95
Members 1527
Share Capital 10,03,900/-
Deposits 3,76,620/-
Total 13,80,520/-
Dated 31-03-2022 Working Capital as Follows
Members 5516
Share Capital 2,91,46,700/-
Reserve Fund 1,60,92,206/-
Other Funds 1,79,84,166/-
Deposits 25,98,28,961/-
Total 32,30,52,033/-
- Our association has so far been in the “A” Grade
- Awarded by the Department as the “Best Co-operative Society” in the year 2001-2002 and 2002-2003
- In the 55thAll India Co-operative Sapthaha, the former President of the Association, Mr. H R Ramachandra Rao, has been honored with the award of “Best Co-operative”.
- Karnataka State Credit Co-operative Societies Association (R) has been conferred the “Co-operative Shree” award for our contribution to the field of co-operative services in 2017-2018.
- 65th All India Co-operative Sapthaha 2018 Haveri is honored with the award as “Best Co-operative Society”
- 66th All India Co-operative Sapthaha – 2019 Association, President Sri C V Parthasarathy honored with “Best President” and Mrs S Uma, Incharge-Secretary of the Association awarded “Best Secretary”
ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ., (ರಿ) ನಡೆದು ಬಂದ ದಾರಿ
ಸಮಾಜ ಸೇವೆಯನ್ನು ಗುರಿಯಾಗಿಟ್ಟುಕೊಂಡು ಆರ್ಥಿಕವಾಗಿ ಹಿಂದುಳಿದವರ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸುವ ಉದ್ದೇಶವನ್ನು ಹೊಂದಿ ಒಂದು ಸಹಕಾರ ಸಂಘವನ್ನು ಸ್ಥಾಪಿಸಬೇಕೆಂದು ಚಿಂತಿಸಿ ಮುಖ್ಯ ಪ್ರವರ್ತಕರಾದ ಶ್ರೀ ಎನ್ ವೈ ವಿಶ್ವನಾಥ್ರವರ ಅಧ್ಯಕ್ಷತೆಯಲ್ಲಿ ಶ್ರೀಯುತರಾದ ಹೆಚ್ ಎಸ್ ನಟರಾಜ್, ವಿ ಕೆ ಗೋಪಾಲಾಚಾರ್, ಡಾ|| ಎಸ್ ಎಂ ಸಮೀರ, ಹೆಚ್ ಆರ್ ರಾಮಚಂದ್ರರಾವ್, ಡಾ|| ಕೆ ಎನ್ ಪಂಡಿತ್, ಡಿ ಪ್ರಭಾಕರ್, ಸಿ ವಿ ಪಾರ್ಥಸಾರಥಿ, ಕೆ ಆರ್ ಶಿವಶಂಕರ್, ಎ ರಾಮದಾಸ್, ಹೆಚ್ ವಿ ರಾಜೀವ್, ಹೆಚ್ ಎಸ್ ಶೇಷಗಿರಿ, ಎಸ್ ರಾಮಕೃಷ್ಣ ಶ್ರೀಮತಿ ಜಿ ನಿರ್ಮಲಾದೇವಿ ಹಾಗೂ ಡಾ|| ಎ ಜಾನಕಿರವರ ಉಪಸ್ಥಿತಿಯಲ್ಲಿ ದಿನಾಂಕ:27/11/1994ರಲ್ಲಿ ನಾದಬ್ರಹ್ಮ ಸಂಗೀತ ಸಭಾದ ಸಭಾಂಗಣದಲ್ಲಿ ಪ್ರಥಮ ಸರ್ವ ಸದಸ್ಯರ ಸಭೆಯನ್ನು ಕರೆಯಲಾಯಿತು. ಈ ಸಭೆಯಲ್ಲಿ ಅಂದಿನ ಹದಿನೈದು ಪ್ರವರ್ತಕರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನಿರ್ದೇಶಕರಾಗಿರುತ್ತಾರೆಂದು ಸಹಕಾರ ಇಲಾಖೆಯಿಂದ ಪ್ರತಿನಿಧಿಸಿದ ಶೀ ಸಿ ಎಂ ಮಲ್ಲಿಕಾರ್ಜುನಯ್ಯರವರು ಘೋಷಿಸಿದರು. ಅದರಂತೆ ಪ್ರವರ್ತಕರ ಅವಿರತ ಶ್ರಮದಿಂದಾಗಿ “ಅಗಸ್ತ್ಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., (ರಿ)” ಅಸ್ತಿತ್ವಕ್ಕೆ ಬಂದಿತು. ದಿನಾಂಕ:07/12/1994ರಂದು ಪ್ರಧಾನ ಕಛೇರಿಯನ್ನು ಮುಖ್ಯ ಅತಿಥಿಗಳಾಗಿ ಮೈಸೂರಿನ ಅಂದಿನ ಪೆÇೀಲಿಸ್ ಕಮೀಷನರ್ರವರಾಗಿದ್ದ ಶ್ರೀಯುತ ಕಸ್ತೂರಿ ರಂಗನ್ ಹಾಗೂ ಸಹಕಾರ ಇಲಾಖೆಯ ಡೆಪ್ಯೂಟಿ ರಿಜಿಸ್ಟ್ರಾರ್ ಆಗಿದ್ದ ಶ್ರೀ ಯದುನಾಥ್ರವರು ಉದ್ಘಾಟಿಸಿದರು. ಅದೇ ದಿನದಿಂದ ಹದಿನೈದು ಆಡಳಿತ ಮಂಡಲಿ ಸದಸ್ಯರು, 1527 ನೋಂದಾಯಿತ ಸದಸ್ಯರುಗಳಿಂದ ಸಂಘದ ಕಾರ್ಯ ಕಲಾಪಗಳು ಪ್ರಾರಂಭಗೊಂಡಿತು.
ಆ ಸಮಯದಲ್ಲಿ ಸಂಘವು ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಸಹಕಾರ ಸಂಘಗಳ ನಿಯಮದಂತೆ ಆಡಳಿತ ಮಂಡಲಿ ಸದಸ್ಯರಿಗೆ ಚುನಾವಣೆ ನಡೆಸಬೇಕಾಗಿದ್ದು, ಅದರಂತೆ ಮುಂದಿನ ಮೂರು ವರ್ಷಗಳಿಗೂ ಅವಿರೋಧವಾಗಿ ಅದೇ ಆಡಳಿತ ಮಂಡಲಿಯು ಮುಂದುವರೆದು ಬಂದಿರುತ್ತದೆ. ನಂತರ ಸಹಕಾರಿ ನಿಯಮದಂತೆ ಹದಿನೈದರಿಂದ ಹನ್ನೊಂದು ಆಡಳಿತ ಮಂಡಲಿ ಸದಸ್ಯರು ಅವಿರೋಧವಾಗಿ ಮುಂದಿನ 2004ರವರೆಗೂ ಕಾರ್ಯ ನಿರ್ವಹಿಸಿರುತ್ತಾರೆ. 2004ನೇ ಇಸವಿಯಲ್ಲಿ, 2009ನೇ ಇಸವಿಯಲ್ಲಿ, 2014ರಲ್ಲಿ ಆಡಳಿತ ಮಂಡಲಿ ಚುನಾವಣೆ ನಡೆಯಿತು. ಇತ್ತೀಚೆಗೆ ದಿನಾಂಕ:10/02/2019ರಲ್ಲಿ ಸಂಘದ ಆಡಳಿತ ಮಂಡಲಿ ಸದಸ್ಯರ ಚುನಾವಣೆ ನಡೆದು ಹದಿನೈದು ಸದಸ್ಯರು ಚುನಾಯಿತರಾಗಿದ್ದು ಕಾರ್ಯಪ್ರವರ್ತರಾಗಿರುತ್ತಾರೆ.
ಹಾಲಿ ಆಡಳಿತ ಮಂಡಲಿಗೆ ಆಯ್ಕೆಯಾದ ನಿರ್ದೇಶಕರ ವಿವರ:
ಶ್ರೀಯುತರುಗಳಾದ :
ಸಿ ವಿ ಪಾರ್ಥಸಾರಥಿ – ಅಧ್ಯಕ್ಷರು
ಹೆಚ್ ಎಸ್ ಪ್ರಶಾಂತ್ ತಾತಾಚಾರ್ – ಉಪಾಧ್ಯಕ್ಷರು
ಎಂ ಡಿ ಗೋಪಿನಾಥ್ – ಖಜಾಂಚಿ
ಹಾಗೂ ನಿರ್ದೇಶಕರಾಗಿ ಶ್ರೀಯುತರಾದ
ಕೆ ನಾಗರಾಜ್, ಎಂ ಆರ್ ಪ್ರೀತನ್, ಎನ್ ಪಣಿರಾಜ್, ಎಸ್ ಎನ್ ನಾಗಶಂಕರ, ಎಂ ಆರ್ ಬಾಲಕೃಷ್ಣ, ಎನ್ ಎಸ್ ರಂಗನಾಥ್, ಕೆ ಎನ್ ಅರುಣ್, ನಾಗೇಂದ್ರ, ಶ್ರೀಮತಿ ರೇಖಾ ಶ್ರೀಮತಿ ಎಂ ಎನ್ ಸೌಮ್ಯ , ಶ್ರೀಮತಿ ರಾಜಮ್ಮ (Co-Opt) ಮತ್ತು ಶ್ರೀ ಸತೀಶ್ ಜಿ ಎನ್ ((Co-Opt) )
ಸಂಘವು ತನ್ನ ಮೊದಲ ಶಾಖೆಯನ್ನು ವಿಜಯನಗರದಲ್ಲಿ ಮೂಡಾದಿಂದ ಮಂಜೂರಾಗಿದ್ದ ಸಿಎ ನಿವೇಶನದಲ್ಲಿ (ನಂ:ಸಿ ಎ 16, ವಿಜಯನಗರ 2ನೇ ಹಂತ) ನೂತನ ಕಟ್ಟಡವನ್ನು ನಿರ್ಮಿಸಿದ್ದು, ಸದರಿ ಕಟ್ಟಡದ ಉದ್ಘಾಟನೆಯನ್ನು ಅಂದಿನ ಸಹಕಾರ ಸಚಿವರಾದ ಶ್ರೀ ಹೆಚ್ ವಿಶ್ವನಾಥ್ರವರು ದಿನಾಂಕ : 10/08/2003ರಲ್ಲಿ ನೆರವೇರಿಸಿದರು. ಅಂತೆಯೇ ದಿನಾಂಕ:28/01/2004ರಂದು ಡಾ ಟಿ ವಿ ವೆಂಕಟಾಚಲಶಾಸ್ತ್ರಿಗಳಿಂದ ಶಾಖಾ ಕಛೇರಿಯಲ್ಲಿ ವ್ಯವಹಾರ ಕಾರ್ಯಕ್ರಮವನ್ನು ಉದ್ಫಾಟಿಸಿ ಕಾರ್ಯಗತ ಮಾಡಲಾಗಿರುತ್ತದೆ.
2005ರಲ್ಲಿ ಸಂಘದ ದಶಮಾನೋತ್ಸವ ಆಚರಣೆಯನ್ನು ಸಂಭ್ರಮದಿಂದ ಎರಡು ದಿನಗಳು ಆಚರಿಸಲಾಯಿತು. ಅಲ್ಲದೆ ಶಾಖಾ ಕಛೇರಿಯ ಪ್ರಾಂಗಣದಲ್ಲಿ ಅಗಸ್ತ್ಯ ಋಷಿಗಳ ದೇವಾಲಯವನ್ನು ಈ ಸಂದರ್ಭದಲ್ಲಿ ಸ್ಥಾಪಿಸಲಾಯಿತು.
ಸಂಘದ ಮತ್ತೊಂದು ಮಹತ್ ಸಾಧನೆ ಎಂದರೆ ಪ್ರಧಾನ ಕಛೇರಿಗೆ ಸ್ವಂತ ಕಟ್ಟಡವನ್ನು ಕೃಷ್ಣಮೂರ್ತಿಪುರಂ 6ನೇ ಕ್ರಾಸ್ನಲ್ಲಿ ನಿರ್ಮಿಸಲಾಗಿದ್ದು, ಉದ್ಘಾಟನಾ ಸಮಾರಂಭವನ್ನು ದಿನಾಂಕ:24/11/2012ರಂದು ಸಂಘದ ಅಧ್ಯಕ್ಷರಾದ ಶ್ರೀ ಸಿ ವಿ ಪಾರ್ಥಸಾರಥಿಯವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಜಿ ಟಿ ದೇವೆಗೌಡ, ಅಧ್ಯಕ್ಷರು, ಕರ್ನಾಟಕ ಗೃಹ ಮಂಡಳಿ ಹಾಗೂ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರುರವರು ಮತ್ತು ಸಂಘದ ನಿರ್ದೇಶಕರುಗಳು ಸೇರಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘದ ಪ್ರವರ್ತಕರು, ಮಾಜಿ ನಿರ್ದೇಶಕರು ಆದ ಶ್ರೀ ಹೆಚ್ ವಿ ರಾಜೀವ್ರವರು ಕಟ್ಟಡದ ಉದ್ಘಾಟನಾ ಸಮಾರಂಭವನ್ನು ನೇರವೇರಿಸಿದರು. ದಿನಾಂಕ:18/01/2013ರಂದು ಸಂಘದ ಪ್ರವರ್ತಕರು ಮಾಜಿ ನಿರ್ದೇಶಕರಾದ ಶ್ರೀ ಎಸ್ ಎ ರಾಮದಾಸ್ ಶಾಸಕರು ಇವರಿಂದ ನೂತನ ಕಟ್ಟಡದಲ್ಲಿ ಮೊದಲನೇ ವ್ಯವಹಾರಕ್ಕೆ ಚಾಲನೆ ನೀಡುವ ಮುಖಾಂತರ ತನ್ನ ಸ್ವಂತ ಕಟ್ಟಡದಲ್ಲಿ ವ್ಯವಹಾರವನ್ನು ಮುಂದುವರೆಸಲಾಯಿತು. ಈ ಎರಡು ಕಛೇರಿಗಳು ಗಣಕೀಕರಣಗೊಂಡು ಸದಸ್ಯರುಗಳಿಗೆ ಗಣಕೀಕೃತ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ.
ಸಂಘವು 25ನೇ ವರ್ಷದ ರಜತಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ದಿನಾಂಕ:15/02/2020ರ ಶನಿವಾರದಂದು ಸಂಜೆ 5.00 ಗಂಟೆಗೆ ಉದ್ಘಾಟನಾ ಸಮಾರಂಭ ಹಾಗೂ ದಿನಾಂಕ: 16/02/2020ರ ಭಾನುವಾರದಂದು ಸಮಾರೋಪ ಸಮಾರಂಭವನ್ನು ಸಿಂಧೂರ್ ಕನ್ವೆನ್ಷನ್ ಹಾಲ್, ವಿಶ್ವೇಶ್ವರನಗರ, ಮೈಸೂರು ಇಲ್ಲಿ ಯಶಸ್ವಿಯಾಗಿ ನರವೆರೆಸಲಾಯ್ತು
ಈ ಅಭಿವೃದ್ಧಿಗೆ ಸಂಘದ ಕಾರ್ಯಕಾರಿ ಮಂಡಲಿ ಸದಸ್ಯರ ಮತ್ತು ಸದಸ್ಯರುಗಳ ಹಾಗೂ ಹಿತೈಷಿಗಳ, ಸಂಘದ ಸಿಬ್ಬಂದಿ ವರ್ಗದವರ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹವೇ ಶ್ರೀರಕ್ಷೆಯಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.
ಸಂಘದ ದುಡಿಯುವ ಬಂಡವಾಳದ ವಿವರ:
1994-95ರಲ್ಲಿ
ಸದಸ್ಯರು : 1527
ಷೇರು ಬಂಡವಾಳ : ರೂ. 10,03,900-00
ಠೇವಣಿಗಳು : ರೂ. 3,76,620-00
ಒಟ್ಟು : ರೂ. 13,80,520-00
ದಿನಾಂಕ: 31/03/2022ಕ್ಕೆ ಇರುವಂತೆ ದುಡಿಯುವ ಬಂಡವಾಳದ ವಿವರ
ಸದಸ್ಯರು : 5516
ಷೇರು ಬಂಡವಾಳ : ರೂ. 2,91,46,700-00
ಆಪಧ್ದನ ನಿಧಿ : ರೂ. 1,60,92,206-00
ಇತರೇ ನಿಧಿಗಳು : ರೂ. 1,79,84,166-00
ಠೇವಣಿಗಳು : ರೂ. 25,98,28,961-00
ಒಟ್ಟು : ರೂ. 32,30,52,033-00
ನಮ್ಮ ಸಂಘವು ಇದುವರೆಗೂ “ಎ” ಶ್ರೇಣಿಯಲ್ಲೇ ನಡೆದುಕೊಂಡು ಬಂದಿರುತ್ತದೆ.
ಸಂಘಕ್ಕೆ ಬಂದ ಪ್ರಶಸ್ತಿಗಳ ವಿವರ:
1.2001-2002ನೇ ಸಾಲಿನಲ್ಲಿ ಹಾಗೂ 2002-2003ನೇ ಸಾಲಿನಲ್ಲಿ ಸಂಘವನ್ನು “ಅತ್ಯುತ್ತಮ ಸಹಕಾರ ಸಂಘ” ಎಂದು ಪರಿಗಣಿಸಿ ಇಲಾಖೆಯಿಂದ ಪ್ರಶಸ್ತಿ ನೀಡಿರುತ್ತಾರೆ.
2.55ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹೆಚ್ ಆರ್ ರಾಮಚಂದ್ರರಾವ್ರವರನ್ನು “ಉತ್ತಮ ಸಹಕಾರಿ” ಎಂದು ಗೌರವಿಸಿ ಪ್ರಶಸ್ತಿ ನೀಡಲಾಗಿರುತ್ತದೆ.
3.ಕರ್ನಾಟಕ ಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟೀಸ್ ಅಸೋಸಿಯೇಷನ್ (ರಿ) ವತಿಯಿಂದ 2017-2018ರಲ್ಲಿ ಸಹಕಾರ ಕ್ಷೇತ್ರಕ್ಕೆ ಗಣನೀಯ ಸೇವೆಗಾಗಿ ನಮ್ಮ ಸಂಘವನ್ನು ಗುರುತಿಸಿ “ಸಹಕಾರ ಶ್ರೀ” ಪ್ರಶಸ್ತಿಯನ್ನು ನೀಡಲಾಗಿರುತ್ತದೆ.
4.65ನೇ ಅಖಿಲ ಭಾರತ ಸಹಕಾರ ಸಪ್ತಾಹ 2018 ಹಾವೇರಿ ಇಲ್ಲಿ ಸಂಘವನ್ನು “ಅತ್ಯುತ್ತಮ ಸಹಕಾರ ಸಂಘ”ವೆಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು.
5.66ನೇ ಅಖಿಲ ಭಾರತ ಸಹಕಾರ ಸಪ್ತಾಹ – 2019ರಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಸಿ ವಿ ಪಾರ್ಥಸಾರಥಿರವರಿಗೆ “ಉತ್ತಮ ಅಧ್ಯಕ್ಷರು” ಮತ್ತು ಸಂಘದ ಪ್ರಭಾರ ಕಾರ್ಯದರ್ಶಿಗಳಾದ ಶ್ರೀಮತಿ ಎಸ್ ಉಮಾರವರಿಗೆ “ಉತ್ತಮ ಕಾರ್ಯದರ್ಶಿ” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಅಧ್ಯಕ್ಷರು